


Empowering Graduates. Strengthening Society. Spreading Constitutional Awareness.
ಕರ್ನಾಟಕ ಸ್ಟೇಟ್ ಪದವೀಧರ ಸಂಘ (ಮಹಾಮಂಡಳ)
About Our Organization
ಕರ್ನಾಟಕ ಸ್ಟೇಟ್ ಪದವೀಧರ ಸಂಘ (ಮಹಾಮಂಡಳ) is a socially responsible organization committed to the development of graduates and society.
This organization was formed with the vision to uplift educated youth and spread awareness about constitutional values among citizens. We believe that education and awareness are the strongest tools to build a better nation.
VISION & MISSION
Our vision is to build an educated, empowered, and constitutionally aware society where every individual understands their rights and responsibilities. Our mission is to promote education among youth, spread awareness about the Indian Constitution (Savidhana), and support students and graduates in their personal and professional growth. Through continuous social welfare activities, awareness programs, and community engagement, we strive to create a responsible and progressive society.
ಕರ್ನಾಟಕರಾಜ್ಯ ಪದವೀಧರ ಸಂಘ (ಮಹಾಮಂಡಳ) N G O ಪಶ್ಚಿಮ ಪದವೀಧರ ಕ್ಷೇತ್ರದ ಮತದಾರರ ನೋಂದಣಿ ಅಭಿಯಾನ ಧಾರವಾಡ .ಗದಗ್. ಹಾವೇರಿ .ಹಾಗೂ ಉತ್ತರ ಕನ್ನಡ .ಸನ್ಮಾನ್ಯ ಪದವೀಧರ ಬಂಧುಗಳಾದ ತಮ್ಮಲ್ಲಿ ಸವಿನಯ ಪ್ರಾರ್ಥನೆ .
ನಾನು ಪದವೀಧರ ಮಹಾಮಂಡಲದ ಮುಖ್ಯಸ್ಥನಾಗಿ ಗಡಿಭಾಗ ಹಿಡಿದು ರಾಜ್ಯದ್ಯಂತ ಸಂಘಟನೆಗಾಗಿ ಹಾಗೂ ನಿರುದ್ಯೋಗಿ ಪದವೀಧರರಿಗಾಗಿ ಶ್ರಮಿಸಿದ್ದು ತಾವು ಸುಮಾರು ವರ್ಷದಿಂದ ತಿಳಿದುಕೊಂಡಿದ್ದೀರಿ 2005 ರಿಂದ ಇಲ್ಲಿಯವರೆಗೆ ಪ್ರಯತ್ನದ ಹಾದಿಯಲ್ಲಿ ಇದ್ದು ಸುಮಾರು 18000 ಜನರನ್ನು ನೋಂದಣಿ ಮಾಡಿಸಲು ಪ್ರೇರೇಪಿಸಿ ನಮ್ಮ ಸಂಸ್ಥೆ ಮಾರ್ಗದರ್ಶನ ನೀಡಿದೆ ಪದವೀಧರರು ಮತ ಚಲಾಯಿಸಲು ನೊಂದಣಿ ಮಾಡಿಸುವ ಬಗ್ಗೆ ಜಾಹಿರಾತ್ ಕೊಟ್ಟಿದ್ದು ಹೋಬಳಿಯಲ್ಲಿ ಸಭೆ ಸಮಾರಂಭಗಳನ್ನು ಕರೆದಿದ್ದು ತಮ್ಮ ಸಹಕಾರದ ಶಕ್ತಿಯೇ ಎಂಬುದು ಅಭಿನಂದನೆಸುತ್ತಿದ್ದೇನೆ
ಕೆಲವೇ ದಿವಸದಲ್ಲಿ ಪಶ್ಚಿಮ ಪದವಿಧರ ವಿಧಾನ ಪರಿಷತ್ತು ಚುನಾವಣೆ ಬರುತ್ತಿದ್ದು ಇಂದು ಮತ ಚಲಾಯಿಸುವ ಪದವೀಧರರು ಸಾಮಾಜಿಕ .ಶೈಕ್ಷಣಿಕ. ಆರ್ಥಿಕ .ಚಿಂತನೆ ಬಗ್ಗೆ ವಿಚಾರಿಸುವವರಿಗೆ ಮಾತ್ರ ಮತ ಚಲಾಯಿಸಲು ಸಾಧ್ಯ. ಅವುಗಳೆಲ್ಲವನು ಗಾಳಿಗೆ ತೂರಿ ಹಣ ಇತರೆ ವಸ್ತುಗಳನ್ನುಪಡೆದು ಅಥವಾ ಪಕ್ಷದ ಹೆಸರಿನ ಅಭ್ಯರ್ಥಿಗಳನ್ನು ಮಾತ್ರ ಮತ ಚಲಾಯಿಸುತ್ತಿರುವುದನ್ನು ನೋಡಿ ಇಂದಿನಯುವ ಪೀಳಿಗೆ ಸುಮ್ಮನೆ ಕುಳಿತುಕೊಂಡರೆ ಪ್ರಜಾಪ್ರಭುತ್ವಕ್ಕೆ ಹಾಗೂ ಸಂವಿಧಾನಕ್ಕೆ ಗೌರವ ತೋರಿಸಿದಂತಾಗುವುದಿಲ್ಲವೇ ಸ್ವತಂತ್ರ ಸಿಗುವುದಕ್ಕಿಂತ ಪೂರ್ವದಲ್ಲಿ ಶಿಕ್ಷಣದ ಕ್ರಾಂತಿಯನ್ನೇ ಮಾಡಿದ ಶ್ರೀಮತಿ ಸಾವಿತ್ರಿಬಾಯಿ ಪುಲೆ ..ಮಹಿಳೆಯರಿಗಾಗಿ ದೇಶದಲ್ಲಿಯೇ ಪ್ರಥಮ ಜ್ಞಾನ ನೀಡಿದ ಮಹಿಳೆ ಆದರೆ
ಎಲ್ಲರಿಗೂ ಶಿಕ್ಷಣ .ಉದ್ಯೋಗ . ಸಂವಿಧಾನದಲ್ಲಿ ಇರಬೇಕೆಂದು ಹೇಳಿದ ಶಿಕ್ಷಣ ತಜ್ಞ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಡಾ. ಸರ್ವಪಲ್ಲಿ ರಾಧಾಕೃಷ್ಣ .ಡಾ. ಎಪಿಜೆ ಅಬ್ದುಲ್ ಕಲಾಂ .ಡಾ.ನಿಜಲಿಂಗಪ್ಪ .ಡಾ ಬಿ ಡಿ jatti. ಅಲ್ಲದೆ ರಾಮಕೃಷ್ಣ ಹೆಗಡೆ. ಎಸ್ ಆರ್ ಬೊಮ್ಮಾಯಿ .ವೀರೇಂದ್ರ ಪಾಟೀಲ್ .ಘಟಾನುಘಟಿಗಳು ಪದವೀಧರ ಹಾಗೂ ಶಿಕ್ಷಕರಿಂದ ಪ್ರಜಾಪ್ರಭುತ್ವ ಏಳಿಗೆ ಸಾಧ್ಯ ಎಂಬುದು ಇವರ ಆಸೆಯಾಗಿತ್ತು. ಆದರೆ ಇಂದಿನ ದಿವಸ ಎಲ್ಲವೂ ತದ್ವಿರುದ್ಧವಾಗಿದೆ ಶ್ರೀಮಂತರು .ಬಂಡವಾಳ ಶಾಹಿಗಳು .ಹಾಗೂ ಗುಂಡಾಗಳು ಆಳುವ ಪ್ರಜಾಪ್ರಭುತ್ವ ವಾಗಿದ್ದು ಪ್ರಜ್ಞಾವಂತ ಪದವೀಧರರು ಇಂಥವರೆಲ್ಲರನ್ನು ದೂರ ಮಾಡಿ ನಮ್ಮ ಪದವೀಧರ ಸಂಘದಿಂದಲೇ ಸ್ಪರ್ಧೆಗಿಳಿಸಲು ತೀರ್ಮಾನಿಸಲಾಗಿ ಚುನಾವಣೆ ಎಂಬ ಆದರ್ಶದ ಗಂಟೆಯನ್ನು ಕಟ್ಟಬೇಕಾಗಿದೆ. ಅದರ ಜಾಗೃತಿಯನ್ನು ಎಲ್ಲ ಮತದಾರರು ಮನೆಮನೆಗೆ ತೆರಳಿ ಯಾವುದೇ ಹಣದ ಆಸೆಗೆ ಒಳಗಾಗದೆ ಮತದಾರರೆಲ್ಲ ಜಾಗೃತರಾಗಿ ಮುನ್ನಡೆಯಬೇಕೆಂದು ವಿನಂತಿಸುತ್ತಿದ್ದೇನೆ
ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಲದ ಹಿಂದಿನ ಹೋರಾಟದ ಮಾಹಿತಿಯನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ
1) ಪದವೀಧರ ನಿರುದ್ಯೋಗಿ ಯುವಕರಿಗೆ ಸರಕಾರದ ಭೂಮಿಯನ್ನು ನೀಡಿ ಕೃಷಿ ಅಭಿವೃದ್ಧಿ ಪಡಿಸುವುದು ಹಾಗೂ ಅಭಿವೃದ್ಧಿ ಆಗುವವರೆಗೂ ನಿರುದ್ಯೋಗ ಬತ್ತೆ ನೀಡುವುದು ಪತ್ರಿಕಾ ವರದಿಗಾರನಾಗಿ ಪದವೀಧರರನ್ನೇ ನೇಮಿಸುವುದು
2) ಪದವಿ ಪಡೆದ ಎಲ್ಲ ಬುದ್ಧಿ ಜೀವಿಗಳಿಂದ ನಿರುದ್ಯೋಗ ಹೊಡೆದೋಡಿಸುವ ಬಗ್ಗೆ ವಿಚಾರ ಸಂಕಿರಣ ಏರ್ಪಡಿಸುವುದು ಖಾಸಗಿ ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವ ಪದವೀಧರರಿಗೆ ರಾಜ್ಯ ಸರ್ಕಾರದಿಂದ ವಿಮೆ ಒದಗಿಸುವುದು ಹಾಗೂ ಅಕಾಲಿಕ ಮರಣ ಹೊಂದಿದರೆ ಒಂದು ಲಕ್ಷದವರೆಗೆ ಪರಿಹಾರ ಕೊಡಿಸುವುದು 3) ಸರಕಾರದ ಸಣ್ಣ ಸಹಕಾರ ಉದ್ಯೋಗದಲ್ಲಿ ( ಸಿಪಾಯಿ ಕ್ಲರ್ಕ್) ಪದವೀಧರರಿಗೆ ಬಡ್ತಿ ನೀಡುವುದು ಹಾಗೂ ವಿಶೇಷ ಗೌರವ ಧನ ಕೊಡುವುದು ಕಾನೂನು ಸಲಹೆ ಗಾರರನ್ನು (ವಕೀಲರಿಗೆ) ಹೆಚ್ಚಿನ ಗೌರವದನ ಹಾಗೂ ವಿವಿಧ ಇಲಾಖೆಯಲ್ಲಿ ಕಾನೂನು ಸಲಹೆಗಾರರೆಂದು ಕಡ್ಡಾಯವಾಗಿ ನೇಮಿಸಿಕೊಳ್ಳುವುದು 4) ಪದವಿ ಪಡೆದಬುದ್ಧಿಜೀವಿಗಳು (ಸಾಹಿತಿಗಳು ವಿದ್ವಾಂಸರು ಕವಿಗಳು) ಪ್ರಾಚಾರ್ಯರು ಉಪನ್ಯಾಸಕರು ಮುಖ್ಯೋಪಾಧ್ಯಾಯರು ಶಿಕ್ಷಕರು ವಿವಿಧ ಇಲಾಖೆಯ ಮುಖ್ಯಸ್ಥರನ್ನು ಸಹಕಾರ ಸಂಘ ಸಂಸ್ಥೆಗಳಲ್ಲಿ ಬ್ಯಾಂಕು ಎಲ್ ಐ ಸಿ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವವರನ್ನು ಗುರುತಿಸಿ ಅಮೂಲ್ಯವಾದ ವಿಚಾರಗಳನ್ನು ಸಂಗ್ರಹಿಸಿ ಹಾಗೂN P S ಹೊಸ ಪಿಂಚಣಿಯನ್ನು ರದ್ದುಪಡಿಸಿ ಒಪಿಎಸ್ ಹಳೆಯ ಪಿಂಚಣಿಯನ್ನು ಜಾರಿಗೆ ತರಲು ಸತತ ಪ್ರಯತ್ನ ಮಾಡುತ್ತಿದ್ದು ತಮ್ಮ ಗಮನಕ್ಕೆ ತರುತ್ತಿದ್ದೇವೆ.5) ಖಾಸಗಿ ಅನುದಾನ ರಹಿತ ಶಾಲಾ ಕಾಲೇಜುಗಳಲ್ಲಿ ಕಡಿಮೆ ಸಂಬಳದಲ್ಲಿ ದುಡಿಯುವ ಶಿಕ್ಷಕರಿಗೆ ವಿಶೇಷ ಗೌರವದನ ಹಾಗೂ ಅನುದಾನಕ್ಕೆ ಶ್ರಮಿಸುವುದು ಮತ್ತು ವಿಮೆ ಭದ್ರತೆ ಹಾಗೂ ಪದವಿದರ ಮಹಿಳೆಯರಿಗೆ ಉದ್ಯೋಗದಲ್ಲಿ ವಿಶೇಷ ಮೀಸಲಾತಿ 6) ಜಿಲ್ಲಾ ಹಾಗೂ ತಾಲೂಕ ಮಟ್ಟದಲ್ಲಿ ನಮ್ಮ ಸಂಘಟನೆ ಹೋರಾಟ ಮಾಡುತ್ತಾ ನಡೆದಿದ್ದು ಹೋಬಳಿ ಹಾಗೂ ಗ್ರಾಮ ಮಟ್ಟದಲ್ಲಿಯೂ ಸಂಘಟನೆಗೆ ತೀರ್ಮಾನಿಸಿರುವುದರಿಂದ ನಮ್ಮ ಮಹಾಸಂಗದಲ್ಲಿ ಪ್ರಮುಖ ಪಾತ್ರ ತಾವು ನಿರ್ವಹಿಸಬೇಕಾಗಿದೆ. ಬಂಧುಗಳೇ ಇಂದಿನ ಪ್ರಜಾ ಪ್ರಭುತ್ವದ ಉಳಿವಿಗಾಗಿ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡುವ ಗೋಸ್ಕರ ಮತದಾರರು ಹೆಚ್ಚು ನೊಂದಣಿ ಮಾಡಿಕೊಂಡು ದುಷ್ಟರನ್ನು ದೂರ ಬಿಟ್ಟು ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ನಮ್ಮ ಸಂಘವು ಪ್ರಾಮಾಣಿಕವಾಗಿ ವಿನಂತಿಸುತ್ತಿದೆ
2026 ನವಂಬರ್ ತಿಂಗಳಲ್ಲಿ ಚುನಾವಣೆ ಬರಲಿದ್ದು ಪದವೀಧರ ಮಹಾಸಂಘದಿಂದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡುವ ಗೋಸ್ಕರ ನಾವು ತಿಳಿಸಿರುವ ಟೆಲಿಗ್ರಾಂ ವಾಟ್ಸಾಪ್ 9449416747 ಈ ಗುಂಪಿಗೆ ಸೇರಿ ಸದಸ್ಯತ್ವ ಪಡೆದು kspmahamandal@gmai .com ಮೇಲ್ ಮುಖಾಂತರ ತಮ್ಮ ಹಲವಾರು ವಿಚಾರಗಳನ್ನು ಹಾಗೂ ಏನಾದರೂ ಸಂಘದ ತಪ್ಪುಗಳಿದ್ದರೆ ತಿಳಿಸುತಿರಂದು ತಮ್ಮಲ್ಲಿ ಭಾವಿಸುತ್ತೇವೆ
ಶ್ರೀ ಮಲ್ಲಿಕಾರ್ಜುನ್ ಗಂಗಾಧರ ರಾಜ್ಯದ ಮುಖ್ಯಸ್ಥರು ಕರ್ನಾಟಕ ರಾಜ್ಯ ಪದವೀಧರ ಸಂಘ (ಮಹಾಮಂಡಳ)9449416747
ಆತ್ಮೀಯ ಬಂಧುಗಳೇ
ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿ ಸುಮಾರು 20 ವರ್ಷದಿಂದ ಹೋರಾಟದಲ್ಲಿದ್ದು ಇವರ ಹೋರಾಟವನ್ನು ಬೆಂಬಲಿಸುತ್ತಾ ಬಂದಿದ್ದೇವೆ .ನಿರುದ್ಯೋಗಿ ಯುವಕರಿಗೆ ಉದ್ಯೋಗ ಗೋಸ್ಕರ ನೂರಾರು ಕಾರ್ಯಕ್ರಮಗಳನ್ನು ಹಾಕಿ ಉದ್ಯೋಗ ಕೊಡಿಸಿದ್ದು ನೆನಪಿಸುತ್ತಿದ್ದೇವೆ . ಸಾವಿರಾರು ಪದವೀಧರರನ್ನು ಉದ್ಯೋಗದಲ್ಲಿ ಸೇರಿಸಿದ್ದು ಹೆಮ್ಮೆಯ ವಿಷಯ. ಇವರ ಹೋರಾಟ ಅಮೂಲ್ಯವಾಗಿದೆ ನಾವು ಸಂಪೂರ್ಣವಾಗಿ ಬೆಂಬಲಿಸುತ್ತಿದ್ದೇವೆ.
ಶ್ರೀ ಬಿ ಆರ್ ಅಜೂರ್ ನಿವೃತ್ತ ಪ್ರಾಂಶುಪಾಲರು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರು ಹಾರೂಗೇರಿ
ಶರಣು ಶರಣಾರ್ಥಿಗಳೊಂದಿಗೆ
ನನ್ನ ಆತ್ಮೀಯ ವಿದ್ಯಾರ್ಥಿ ಸ್ನೇಹಿತರಾದ ಶ್ರೀ ಮಲ್ಲಿಕಾರ್ಜುನ್ ಸಿ ಗಂಗಾಧರ ಇವರು 1990 -9 1ರಲ್ಲಿ ಚನ್ನರಸುಬೇಂದ್ರೆ ಶಿಕ್ಷಣ ಸಂಸ್ಥೆ ಹಾರೋಗೇರಿಯಲ್ಲಿ ಪದವಿ ಕಾಲೇಜಿನಲ್ಲಿ ಓದಿದ್ದು ವಿದ್ಯಾರ್ಥಿ ದೆಸೆಯಲ್ಲಿಯೇ ಅನಂತಕುಮಾರ. ಶ್ರೀಕಾಂತ್ ಕುಲಕರ್ಣಿ. ಅರವಿಂದ್ ರಾವ್ ದೇಶಪಾಂಡೆ .ಚಂದ್ರಕಾಂತ ಬೆಲ್ಲದ .ರವರ ಒಡನಾಡಿಯಾಗಿ ಬೆಳೆದವರು. ಅಲ್ಲದೆ ಶಿಕ್ಷಣ ಪ್ರೇಮಿಗಳಾಗಿ ತಾವೇ ಸ್ವತಃ ಶ್ರೀ ಮುರುಗೇಂದ್ರ ಶಿವಯೋಗಿ ವೀರಶೈವ ವಿದ್ಯಾಪೀಠ ಎನ್ ಜಿ ಒ ಹುಟ್ಟು ಹಾಕಿ ಅಂಗವಿಕಲರು ನಿರ್ಗತಿಕ ಜನರಿಗಾಗಿ ವಿವಿಧ ಯೋಜನೆಗಳನ್ನು ರೂಪಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಒಳ್ಳೆಯ ಕಾರ್ಯಗಳನ್ನು ಮಾಡಿದ ಒಬ್ಬ ಪ್ರತಿಭಾವಂತ ಬಡ ವಿದ್ಯಾರ್ಥಿ. ಇವರು ಬಡವರು ಬಡವರಿಗಾಗಿ ಬಡವರಿಂದಲೇ ಸ್ಥಾಪಿತವಾದ ಸಂಸ್ಥೆ ಎಂದು ಹೇಳುತ್ತಿದ್ದಾರೆ ಪ್ರತಿಭಾವಂತರಾಗಿರುವ ಮಲ್ಲಿಕಾರ್ಜುನ
ಕರ್ನಾಟಕ ರಾಜ್ಯ ಪದವೀಧರ ಮಹಾಮಂಡಳಿ, ಹುಟ್ಟು ಹಾಕಿ ರಾಜ್ಯದ ಮೂಲೆ ಮೂಲೆಗೆ ಸಂದರ್ಶಿಸಿ ನಿರುದ್ಯೋಗಿ ಪದವೀಧರ. ಅನುದಾನ ರಹಿತ ಶಾಲಾ ಕಾಲೇಜುಗಳ ಲ್ಲಿ ಕೆಲಸ ಮಾಡುವ ವ್ಯಕ್ತಿಗಳ ಬಗ್ಗೆ ಪದವೀಧರ ಬಗ್ಗೆ ಜಾಗೃತಿ ಮೂಡಿಸಿದ್ದಾರೆ .ಈ ಸಂಘವು ನಮ್ಮ ರಾಜ್ಯದಲ್ಲಿ ಬಹಳ ಎತ್ತರಕ್ಕೆ ಬೆಳೆಯಬೇಕಾಗಿತ್ತು ಆದರೆ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸದೃಢ ಇರದೆ ಇರುವುದರಿಂದ ಸಂಘವು ಬೆಳದಿರಲಿಕ್ಕಿಲ್ಲ .ಈ ಸಂಘಕ್ಕೆ ತನ್ನದೇ ಪದವಿದರ ಜನರು ಇರುವುದರಿಂದ ಮುಂದಿನ ದಿನಮಾನದಲ್ಲಿ ಪದವೀಧರ ಸಂಘದಿಂದಲೇ ಶಿಕ್ಷಣ ಕ್ಷೇತ್ರ ಬೆಳೆಯಬೇಕಾಗಿದೆ ಅಂದರೆ ತಮ್ಮ ಸಂಘದಿಂದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ವಿಧಾನ ಪರಿಷತ್ ಪ್ರವೇಶಿಸಲೆಂದು ಹಾರೈಸುತ್ತಿದ್ದೇನೆ
ವಂದನೆಗಳೊಂದಿಗೆ
ಡಾ. ರುದ್ರಣ್ಣ ಚಿಲುಮೆ ನಿವೃತ್ತ ಉಪನ್ಯಾಸಕರು ಹಾಗೂ ಸಾಹಿತಿಗಳು-ಧಾರವಾಡ
Services
Education Support
We provide guidance, awareness, and support to students and graduates for better education and career opportunities.
Savidhana Awareness
We conduct programs to educate citizens about the Indian Constitution, rights, and responsibilities.
Graduate Empowerment
We create opportunities for graduates to grow, connect, and contribute to society.
Social Welfare Activities
We organize social programs to support community development and public welfare.
Programs & Events
Regular seminars, awareness camps, and educational events for public engagement.
Membership & Community
Join our organization to be part of a strong and active social network.
Impact